Summary

ಏಕಾಏಕಿ ವಾಹನ ಹಿಮ್ಮುಖವಾಗಿ ಚಲಾಯಿಸಿದ ಕಾರಣ ನಿಯಂತ್ರಣ ಕಳೆದುಕೊಂಡು ಹಿಂಬದಿ ನಿಂತಿದ್ದವರ ಮೇಲೆ‌ ಮಗುಚಿ ಬಿದ್ದಿದೆ.ಕೂಡಲೇ ಸ್ಥಳೀಯರು ಉಪಚರಿಸಿ ಆಸ್ಪತ್ರೆಗೆ ಕೊಂಡೊಯ್ದರೂ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ

Article Body

Kukke subrahamanya: ಬಿಳಿನೆಲೆಯಲ್ಲಿ ಮಗ ಚಲಾಯಿಸುತ್ತಿದ್ದ ಜೀಪು ಮಗುಚಿಬಿದ್ದು ತಂದೆ ಸಾವು
Kukke subrahamanya: ಬಿಳಿನೆಲೆಯಲ್ಲಿ ಮಗ ಚಲಾಯಿಸುತ್ತಿದ್ದ ಜೀಪು ಮಗುಚಿಬಿದ್ದು ತಂದೆ ಸಾವು

ಕಡಬ ಟೈಮ್ಸ್, ಬಿಳನೆಲೆ: ಇಲ್ಲಿನ ಠಾಣಾ ವ್ಯಾಪ್ತಿಯ ಬಿಳಿನೆಲೆ ಮಣ್ಣಿನ ರಸ್ತೆ ಯಲ್ಲಿ ಸಾಗುತ್ತಿದ್ದ ಜೀಪೊಂದು ನಿಯಂತ್ರಣ ಕಳೆದುಕೊಂಡು ಹಿಂಬದಿ ನಿಂತಿದ್ದ ಹಿರಿಯ ವ್ಯಕ್ತಿಯೊಬ್ಬರು ವಾಹನದಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಆ.7ರಂದು ನಡೆದಿದೆ.

ಕಡಬ ತಾಲೂಕು ಬಿಳಿನೆಲೆ ನಿವಾಸಿ ಧರ್ಮಪಾಲ ( 68ವ) ಮೃತಪಟ್ಟವರು.ಕಚ್ಚಾ ಮಣ್ಣಿನ ಏರು ರಸ್ತೆಯಲ್ಲಿ ಮೃತರ ಮಗ ಚಾಲಯಿಸುತ್ತಿದ್ದರು.ಮೇಲೆ‌ ಏರದ ಹಿನ್ನಲೆ ಜೀಪಿನಲ್ಲಿದ್ದ ತಂದೆ ಧರ್ಮಪಾಲರು ಕೆಳಗೆ ಇಳಿದು ವಾಹನದ ಹಿಂಬದಿ ನಿಂತಿದ್ದರು ಎನ್ನಲಾಗಿದೆ.

ಏಕಾಏಕಿ ವಾಹನ ಹಿಮ್ಮುಖವಾಗಿ ಚಲಾಯಿಸಿದ ಕಾರಣ ನಿಯಂತ್ರಣ ಕಳೆದುಕೊಂಡು ಹಿಂಬದಿ ನಿಂತಿದ್ದವರ ಮೇಲೆ‌ ಮಗುಚಿ ಬಿದ್ದಿದೆ.ಕೂಡಲೇ ಸ್ಥಳೀಯರು ಉಪಚರಿಸಿ ಆಸ್ಪತ್ರೆಗೆ ಕೊಂಡೊಯ್ದರೂ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ .ನಾಗೇಶ ಎಂಬವರು ನೀಡಿದ ದೂರಿನಂತೆ ಠಾಣೆಯಲ್ಲಿ ಅ.ಕ್ರ 54/2025 ಕಲಂ 281,106 ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.